Entry: Google desktop and Kannada search Oct 16, 2004



Today I downloaded and installed Google's new desktop (beta) from http://desktop.google.com/. Great tool. Surprised the speed with which it is able to search the hard disk and get the results in a fraction of second.

ಏನೇ ದೊರಕಿದರೂ ಅದರಲ್ಲಿ ಕನ್ನಡಕ್ಕೇನಿದೆ ಎಂದು ಹುಡುಕಾಡುವುದು ನನ್ನ (ದುರ)ಅಭ್ಯಾಸ. ಅದರಂತೆ, ಇದರಲ್ಲೂ ಕನ್ನಡದ ಹುಡುಕುವಿಕೆ ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯಲು ಪ್ರಯತ್ನಿಸಿದೆ. ಮೊದಲು ಯುನಿಕೋಡ್ ವಿಧಾನದಲ್ಲಿ ಹುಡುಕಿದೆ. ಆಶ್ಚರ್ಯ. ಪವನಜ ಎಂದು ಬೆರಳಚ್ಚಿಸಿ ಹುಡುಕಿದೆ. ಯುನಿಕೋಡ್‌ನಲ್ಲಿ ಕನ್ನಡದಲ್ಲಿ ನನ್ನ ಹೆಸರಿರುವ ಎಲ್ಲ ಕಡತಗಳನ್ನು ಹುಡುಕಿ ಕೊಟ್ಟಿತು. ಹೆಚ್ಚಿನ ಕಡತಗಳು Microsoft Word doc fileಗಳಾಗಿದ್ದವು. ಆದರೆ ಒಂದು ಸಣ್ಣ ಕೊರತೆ. ಕಡತದ ಸಾರಾಂಶದಲ್ಲಿ ಒತ್ತಕ್ಷರಗಳು ಜೋಡಿಕೊಂಡಿರಲಿಲ್ಲ. ವ್ಯಂಜನಾಕ್ಷರಗಳಿಗೆ ಸ್ವರ ಮಾತ್ರೆಗಳು ಸರಿಯಾಗಿ ಜೋಡಿಕೊಂಡಿದ್ದವು. ಗೂಗ್ಲ್‌ನವರೇ ಇದು ಸದ್ಯಕ್ಕೆ ಇಂಗ್ಲೀಶ್ ಭಾಷೆಯಲ್ಲಿ ಮಾತ್ರ ಕೆಲಸ ಮಾಡುತ್ತದೆ ಎಂದಿದ್ದಾರೆ.

I did some more experiments in seraching the documents containing Kannada text in Baraha font. I invoked the Baraha direct keyboard engline and typed some text in the search location. It appeared gibberish as expected but the search results gave all the docs containing the typed text. Great!

ಮತ್ತೆ ಸಿಗೋಣ,
ಪವನಜ पवनज பவநஜ పవనజ Pavanaja

   0 comments

Leave a Comment:

Name


Homepage (optional)


Comments