Entry: Vasudhendra's book release function Jan 25, 2004



ಈ ದಿನ ನಾನು ವಸುಧೇಂದ್ರರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದರಲ್ಲೇನು ವಿಶೇಷ ಅಂತೀರಾ? ಅದೇನು ಅಂತಹ ವಿಶೇಷವಲ್ಲ. ದೊಡ್ಡ ದೊಡ್ಡ ಖ್ಯಾತನಾಮರು ಕಾರ್ಯಕ್ರಮಕ್ಕೆ ಬಂದರೆ ಅದು ದೊಡ್ಡ ಸುದ್ದಿಯಾಗುತ್ತದೆ. ನನ್ನಂತಹವರು ಹೋದರೆ ಸುದ್ದಿಯಾಗುವುದಿಲ್ಲ. ಬೇಕಿದ್ದರೆ ನಾಳೆಯ ದಿನ ಪತ್ರಿಕೆಗಳನ್ನು ಓದಿ ನೋಡಿ. ಯಾವ ವರದಿಯಲ್ಲೂ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಬರೆದಿರುವುದಿಲ್ಲ. ಆದುದರಿಂದ ನಾನೇ ಇಲ್ಲಿ ಬರೆಯುತ್ತಿದ್ದೇನೆ. ಸರಿ, ನಾನು ಹೋಗಿದ್ದೆ. ಏನಾಯಿತೀಗ? ಏನೂ ಇಲ್ಲ. ಈ ಬ್ಲಾಗಿಂಗ್ ಇರುವುದೇ ಇಂತಹ ಸಮಯ ಹಾಳೂ ಮಾಡುವ "ಕುಟ್ಟುವಿಕೆಗೆ" ಸ್ವಾಮಿ. ಇದನ್ನು ಪೂರ್ತಿ ಓದಿ ನಿಮ್ಮ ಸಮಯ ಹಾಳಾಗಿದ್ದರೆ ಅದಕ್ಕೆ ನಾನು ಹೊಣೆಯಲ್ಲ. ನೀವು ಈ ರೀತಿ ಪ್ರತೀಕಾರ ತೆಗೆದುಕೊಳ್ಳಬಹುದು: ನೀವೂ ಒಂದು ಬ್ಲಾಗಿಂಗ್ ಸುರು ಮಾಡಿ (ಅದು ಕನ್ನಡದಲ್ಲಿರಲಿ) ಅದರ ವಿಳಾಸ ನನಗೆ ಕಳುಹಿಸಿಕೊಡಿ!

ಮತ್ತೆ ಸಿಗೋಣ,
ಪವನಜ
ಜನವರಿ ೨೫, ೨೦೦೪

   1 comments

Sandeepa Nadahalli
June 8, 2006   12:46 AM PDT
 
ನೀವು ಯಾಕೆ ಕೇಳಿದಿರೋ ಗೊತ್ತಿಲ್ಲ.
ಆದರೂ ಕೊಡುತ್ತಿದ್ದೇನೆ ನನ್ನ ಬ್ಲಾಗಿನ ವಿಳಾಸ.

ಸಮಯವಿದ್ದಾಗ ಒಮ್ಮೆ ಭೇಟಿ ಕೊಡಿ.

ಸಂದೀಪ ನಡಹಳ್ಳಿ.

Leave a Comment:

Name


Homepage (optional)


Comments